ದೇಶ

ಅಗ್ನಿವೀರರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ವಿಸ್ತರಿಸಬೇಕು: ಮೋದಿ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ ಒತ್ತಾಯ

Nagaraja AB

ಬುರ್ದ್ವಾನ್: ಅಗ್ನಿಪಥ್ ಯೋಜನೆಯಡಿ ನೇಮಕವಾಗುವ ಯೋಧರ ನಿವೃತ್ತಿ ವಯಸ್ಸನ್ನು  65 ವರ್ಷಕ್ಕೆ  ವಿಸ್ತರಿಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಸೋಮವಾರ  ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೂತನ ಸೇನಾ ನೇಮಕಾತಿ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, ಅಗ್ನಿಪಥ್ ಯೋಜನೆಯಡಿ ನೇಮಕವಾಗುವ ಯೋಧರಿಗೆ ನಾಲ್ಕು ತಿಂಗಳ ಕಾಲ ತರಬೇತಿ ನೀಡಿ, ನಾಲ್ಕು ವರ್ಷಗಳಿಗೆ ನೇಮಕ ಮಾಡಲಾಗುತ್ತದೆ. ನಾಲ್ಕು ವರ್ಷಗಳ ನಂತರ ಈ ಯೋಧರು ಏನು ಮಾಡುತ್ತಾರೆ? ಅವರ ಮುಂದಿನ ಭವಿಷ್ಯವೇನು? ಇದು ಅಸ್ಥಿರವಾಗಿದೆ. ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

ಬಿಜೆಪಿ ಅಗ್ನಿಪಥ್ ಯೋಜನೆ ಬಳಸಿಕೊಂಡು ತನ್ನ ಸ್ವಂತ ಶಸಸ್ತ್ರ ಪಡೆಯನ್ನು ಸ್ಥಾಪಿಸಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜಿ ಈ ಹಿಂದೆ ಹೇಳಿಕೆ ನೀಡಿದ್ದರು.

SCROLL FOR NEXT